ನೀವೇಕೆ ನೋಡುತ್ತಿಲ್ಲ ನನ್ನ ಕಡೆ
ಅಲ್ಲೇನು ನೋಡಿ ನಿಮ್ಮ ರೋದನ.
ಇತ್ತ ನೋಡಿ ಒಮ್ಮೆ,
ಇಲ್ಲಿದ್ದೇನೆ, ನಾನಿಲ್ಲಿದ್ದೇನೆ
ಮನೆಯಿಂದ ಹೊರಗೆ ಬಂದೆ ಅಷ್ಟೇ
ಅಷ್ಟಕ್ಕೇ ನಾ ನಿಮಗಿಲ್ಲವಾದೆನೇ
ಇತ್ತ ನೋಡಿ ಒಮ್ಮೆ,
ಇಲ್ಲಿದ್ದೇನೆ, ನಾನಿಲ್ಲಿದ್ದೇನೆ
ಹೊತ್ತರೆಲ್ಲ ನಾಲ್ಕು ಜನ ನನ್ನ ಮನೆಯನ್ನ
ಏನ ಮಾಡುವಿರಿ ಆ ನನ್ನ ಗೂಡನ್ನ
ಇತ್ತ ನೋಡಿ ಒಮ್ಮೆ,
ಇಲ್ಲಿದ್ದೇನೆ, ನಾನಿಲ್ಲಿದ್ದೇನೆ
ಸುಟ್ಟರೆಲ್ಲಾ ನಾನಿದ್ದ ಮನೆ
ಇನ್ನೆಲ್ಲಿ ನನಗೆ ಸೂರು
ಇತ್ತ ನೋಡಿ ಒಮ್ಮೆ,
ಇಲ್ಲಿದ್ದೇನೆ, ನಾನಿಲ್ಲಿದ್ದೇನೆ
ಸ್ನೇಹಿತರೇ ಬಂಧುಗಳೇ
ಆಕಾಶದೆಡೆ ನಿಮ್ಮದೇನು ದೃಷ್ಟಿ,
ಇತ್ತ ನೋಡಿ ಒಮ್ಮೆ,
ಇಲ್ಲಿದ್ದೇನೆ, ನಾನಿಲ್ಲಿದ್ದೇನೆ
ಕರೆ ಬಂತು ನನಗೂ,
ಸಿದ್ದವಾಗಿದೆ ಮತ್ತೊಂದು ಮನೆ
ಸದ್ಯ ಮೇಲಿದ್ದೇನೆ,
ಮತ್ತೆ ಬುವಿಗೆ ಬರಲಿದ್ದೇನೆ.