ಬಾ ಎಂದು ಕೈ ಚಾಚಿ ಕರೆಯುತ್ತಿದೆ ಹಿಮಾಲಯ
ಕಣ್ಣಿಗೆ ಕಾಣುವ ಜಾಗವೆಲ್ಲ ಇಲ್ಲಿ ದೇವಾಲಯ
ಅನಿಸುತಿದೆ ನಾನು ಇಲ್ಲಿಗೆ ಹೊಸಬನಲ್ಲ
ನೆನಪು ಯಾವ ಜನ್ಮದ್ದೂ ಮರೆತಂತಿಹುದೆಲ್ಲ
ಧ್ಯಾನಕ್ಕೆ ಹುಡುಕಬೇಕಿಲ್ಲ ಪ್ರತ್ಯೇಕ ಜಾಗ
ಎಲ್ಲಿ ಕುಳಿತರೂ ಅದೇ ಧ್ಯಾನ ಮಂಟಪ
ಕಣ್ತೆರೆದು ಕುಳಿತರೆ ಎಲ್ಲೆಲ್ಲೂ ದೇವರೇ ಪ್ರತ್ಯಕ್ಷ
ಧ್ಯಾನಕೆ ಕಣ್ಮುಚ್ಚಿ ಮಾಡದಿರು ನಿರ್ಲಕ್ಷ್ಯ
ಕೈಲಾಸವು ಇಲ್ಲೇ ವೈಕುಂಟವು ಇಲ್ಲೇ
ಸ್ವರ್ಗವು ಇಲ್ಲೇ ನರಕ ಒಂದಿಲ್ಲವಷ್ಟೇ
ಅವರವರ ಇಚ್ಚೆಗೆ ಅವರವರ ಭಕ್ತಿಗೆ
ಮಾರ್ಗ ಇಲ್ಲಿಹುದು ಅವರವರ ಮುಕ್ತಿಗೆ
ಶಿವನ ನೆನೆದರೆ ಇದೇ ಕೈಲಾಸ
ವಿಷ್ಣುವ ನೆನೆದರೆ ಇದೇ ವೈಕುಂಟ
ಮನದ ಆಲೋಚನೆಯಲ್ಲಾ ಬ್ರಹ್ಮಜ್ಞಾನ
ವಿಜ್ಞಾನದ ತರ್ಕ ಇಲ್ಲಿ ಅಜ್ಞಾನ
ದೂರ ದೇಶಗಳಿಂದ ಬರುವವರಿಲ್ಲಿ
ಅನುಭಾವಿಸಲು ಈ ಪ್ರಕೃತಿಯ ಶಕ್ತಿ
ಅದೇಕೋ ಹೆಚ್ಚಿನ ಭಾರತೀಯರಲ್ಲಿ
ಮೂಡುತ್ತಿಲ್ಲ ಹಿಮಾಲಯದಲ್ಲಿ ಆಸಕ್ತಿ
ಮುಂದಿನ ಜನ್ಮವೆಂಬುದಿಹುದೋ ಗೊತ್ತಿಲ್ಲ
ಇದ್ದರೂ ಏನಾಗಿ ಹುಟ್ಟುವೆವೋ ತಿಳಿದಿಲ್ಲ,
ನೋಡುವ ಅದೃಷ್ಟ ಬಂದಿದೆ ಈ ಜನ್ಮದಲ್ಲಿ
ಬನ್ನಿ ಆನಂದಿಸೋಣ ಈ ಭಾರತದ ಶಿರದಲ್ಲಿ.