ಒಂದು ಚಾಟ್ಸ್ ಅಂಗಡಿಯ ಮುಂದೆ
ಎಲ್ಲರನ್ನೂ ಕೂಗಿ
ಮತ್ತೊಂದು ಹೋಟೆಲಿನ ಎರಡನೇ
ಮಹಡಿಗೆ ಹೋಗಿ
ಮಗದೊಂದು ಹೋಟೆಲಿನಲ್ಲಿ
ಚಾಟ್ಸ್ ತಿಂದವರಾಗಿ
ಕಳೆದೆವು ಈ ಸಂಜೆ
ತುಂಬಾ ಸೊಗಸಾಗಿ
ಒಬ್ಬರು ಮತ್ತೊಬ್ಬರನ್ನು ಹೊಗಳುತ್ತಾ
ಮತ್ತೊಬ್ಬರು ಇನ್ನೊಬ್ಬರ ಕಾಲೆಳೆಯುತ್ತಾ
ಶಾಲೆಯ ವಿಚಾರಗಳನ್ನು ಮೆಲಕು ಹಾಕುತ್ತಾ
ಈ ಸಂಜೆ ತುಂಬಿತ್ತು ನಗುವ ಚೆಲ್ಲುತ್ತಾ
ಮತ್ತೆ ಭೇಟಿಯಾಗೋಣ ಸದ್ಯದಲ್ಲಿ
ಅವಶ್ಯಕ ಈ ನಗು ದಿನಚರಿಯ ಮಧ್ಯದಲ್ಲಿ
ಗ್ರೂಪಿಗೆ ಮತ್ತೇ ನನ್ನ ಸೇರಿಸಿದ ಈ ಸಂದರ್ಭದಲ್ಲಿ
ಧನ್ಯವಾದ ಹೇಳುವೆ ನನ್ನ ಈ ಕನ್ನಡ ಕಾವ್ಯದಲ್ಲಿ