ಗುರುರಾಜ
ಶಾಸ್ತ್ರಿ
ವೈರಲ್ ಜ್ವರ
13-08-2021
ವೇದ ಪಠಣದಲ್ಲಿ ಗಂಟಲು ಬೇನೆಯಿಂದ ಬಂದಿತ್ತು ಅಪಸ್ವರ ನಾಂದಿಯಾಗಿತ್ತು ಮುಂದೆ ಬರಲಿರುವ ಬಾರಿ ಜ್ವರ ಕಾಯುವುದು ಎಂತು, ಮರುದಿನವೇ ಬಂತು ದೇಹಕ್ಕೆ ಬಿಸಿ ತಂತು ಸಿದ್ದ , ವೈದ್ಯರಿಗೆ ಈ ವರ್ಷದ ಕಂತು ಕರುಣೆ ಇಲ್ಲದ ವೈದ್ಯರು ಕೈಗೆ ಸೂಜಿ ಚುಚ್ಚಿದರು ಒಂದೆರಡು ಗುಳಿಗೆ ಕೊಟ್ಟರು ವಾರ ಬಿಟ್ಟು ಮತ್ತೆ ಬಾ ಎಂದರು ಏಳು ದಿನ ಪೂರ್ತಿ ಬೆಡ್ ರೆಸ್ಟು ನನ್ನ ಮನೆಯಲ್ಲೇ ನಾನೇ ಅರೆಷ್ಟು ಆಟ ವ್ಯಾಯಾಮಕ್ಕೆ ಅಡ್ಡ ಬಂದಿತ್ತು ಬ್ಲಡ್ ಟೆಸ್ಟು ಪುಸ್ತಕ ಓದಲು ಸಿಕ್ಕಿತು ಸಮಯ ಒಂದಿಷ್ಟು ಮಾತ್ರೆಗಳ ಅಡ್ಡಪರಿಣಾಮವೇ ವಿಚಿತ್ರ ಹಳೆಯ ನೆನಪು ಕಣ್ಮುಂದೆ ಬರುವುದು ಸಚಿತ್ರ   ಕನಸು 20 ವರ್ಷದ ಹಳೆಯ ಮನೆಗೆ ಕರೆದುಕೊಂಡು ಹೋಗಿತ್ತು ನನ್ನ ಬೇನೆಗೆ ತಾನು ನರಳುತ್ತಾ ಅಮ್ಮನ ಕೈ ನನ್ನ ತಲೆ ಸವರಿತ್ತು. ಏನೀ ವೈರಲ್ ಜ್ವರದ ಮಹಿಮೆಯೋ ನಾನರಿಯೆ ಜ್ವರ ನಿಂತರು ಆರು ತಿಂಗಳು ಮೈ ಕೈ ನೋವು ಉಳಿಯೇ. ತರುವುದಾದರೆ ಅಮ್ಮನ ಕೈ ಸ್ಪರ್ಶದ ಅನುಭವ ಸದಾ ಜ್ವರಕ್ಕೆ ಹೇಳುವುದೇ ಬೇಡವೆನಿಸುತ್ತದೆ ವಿದಾ.
ಅನಿಸಿಕೆಗಳು