ಗುರುರಾಜ
ಶಾಸ್ತ್ರಿ
ಬೊಗಳೋ ಶ್ವಾನ
13-08-2021
ಶ್ವಾನ ಒಂದು ಕಾನನಕೆ ರಾಜನಾಯಿತು ರಾಜ ಶ್ವಾನವ ಹಲವು ಶ್ವಾನ ಹಾಡಿ ಹೊಗಳಿತು ಕೆಲವು ಶ್ವಾನಕೆ ದೊರೆಯ ಮೇಲೆ ಹೊಟ್ಟೆ ಉರಿಯಿತು ವಿಷಯ ವಿಲ್ಲದೆ ಬಾಯಿ ತೆರೆಯುತ ಬೊಗಳಲಾರಂಭಿಸಿತು ರಾಜ ಶ್ವಾನಕೆ ಹೊಟ್ಟೆ ಉರಿಯ ವಿಷಯ ತಿಳಿಯಿತು ಬೊಗಳೋ ಶ್ವಾನಕೆ ಒಂದೊಂದು ಕಿರೀಟ ಕೊಟ್ಟಿತು ಬಿಟ್ಟಿ ಊಟ ರೊಟ್ಟಿ ಗಂಜಿ ರಾಜನೆಸೆಯಲು ಬೊಗಳೋ ಶ್ವಾನ ಬಾಲ ಮುದುಡಿ ಬಾಯಿ ಮುಚ್ಚಿತು ಬಿಟ್ಟಿ ರೊಟ್ಟಿ ಪ್ರತಿವರುಷ ಬರಲು ಬೊಗಳೋ ಶ್ವಾನ ದುಡಿತ ಮರೆಯಿತು ರಾಜ ಶ್ವಾನ ಹಲವು ವರ್ಷ ನೆಮ್ಮದಿಯಲಿ ಕಾಡನಾಳಿತು ಕಾಡು ರಾಜನಾಗಿ ಈಗ ಸಿಂಹ ಆಯ್ಕೆಯಾಯಿತು ಬೊಗಳೋ ಶ್ವಾನಕೆ ರೊಟ್ಟಿ ಗಂಜಿ ಅಂದೇ ನಿಂತಿತು ತೊಟ್ಟ ಕಿರೀಟವೆಲ್ಲವನ್ನು ಶ್ವಾನ ವಾಪಸ್ ಮಾಡಿತು ಏನು ವಿಷಯವಿಲ್ಲದೆಯೇ ಬೊಗಳಲಾರಂಭಿಸಿತು ಸಿಂಹ ಬೇರೆ ಪ್ರಾಣಿಗಳ ಮನವ ಗೆದ್ದಿತು ಕಾಡಿನುದ್ದಾರ ನನ್ನ ಪ್ರಥಮ ಆದ್ಯತೆ ಎಂದಿತು ಹಸಿರು ಉಟ್ಟು ಕಾಡು ಒಳ್ಳೆ ಹೆಸರು ಮಾಡಿತು ಬೊಗಳೋ ಶ್ವಾನ ಸುಸ್ತಾಗಿ ಕಂಗಾಲಾಯಿತು ದುಡಿತ ಮರೆತ ಬಿಟ್ಟಿ ಊಟ ಬೇಡ ಮಕ್ಕಳೇ ರಾಷ್ಟ್ರ ಹಿತಕೆ ದುಡಿವ ನಾವು ಬನ್ನಿ ಈಗಲೇ.
ಅನಿಸಿಕೆಗಳು