ತಂದೆ ತಂದನು ಎರಡು ಶಾವಿಗೆಯ ತಟ್ಟೆ
ಒಂದರ ಮೇಲೆ ಮಾತ್ರ ಇತ್ತು ಒಂದು ಮೊಟ್ಟೆ
ಯಾವ ತಟ್ಟೆ ಬೇಕೆಂದು ಮಗನನ್ನು ಕೇಳಿದ
ಮೊಟ್ಟೆಯ ತಟ್ಟೆಯ ಮಗನು ಆರಿಸಿದ
ಇಬ್ಬರು ಶಾವಿಗೆ ತಿನ್ನುತಲಿರಲು ಹೀಗೆ
ಅಪ್ಪನ ತಟ್ಟೆಯಲಿ ಎರಡು ಮೊಟ್ಟೆ, ಶಾವಿಗೆಯ ಕೆಳಗೆ
ತಂದೆಯಿಂದಾಯಿತು ಮಗನಿಗೆ ಅರಿವು
ಕಣ್ಗಳಿಗೆ ಕಾಣಿಸುವುದು ಎಲ್ಲವೂ ಅಲ್ಲ ಸತ್ಯವು
ಮಾರನೇ ದಿನ ಅದೇ ಆಟ ಮತ್ತೆ
ಮಗನಿಗೆ ಆಯ್ಕೆ ಮಾಡಲು ಹೇಳಿದ ಇಷ್ಟದ ತಟ್ಟೆ
ಈ ಭಾರಿ ಮಗ ಆರಿಸಿದ್ದು ಮೊಟ್ಟೆಯಿಲ್ಲದ ತಟ್ಟೆ
ಆಶ್ಚರ್ಯ, ಶಾವಿಗೆಯ ಕೆಳಗೆ ಇರಲೇ ಇಲ್ಲ ಮೊಟ್ಟೆ
ತಂದೆಯೆಂದನು, ಸದಾ ಅನುಭವವ ನಂಬುವುದು ತಪ್ಪು
ಒಮ್ಮೊಮ್ಮೆ ಜೀವನ ಮೋಸಿಸುವುದು ಮಾಡುತ ನಿನ್ನ ಬೆಪ್ಪು
ಮಾರನೇ ದಿನ ಮತ್ತದೇ ಆಟ
ಕಲಿತಿದ್ದನೇ ಮಗ ಈಗ ಪಾಠ
ಮುಂದೆ ಮೇಜಿನ ಮೇಲೆ ಎರಡು ಶಾವಿಗೆ ತಟ್ಟೆ
ಒಂದು ತಟ್ಟೆಯ ಮೇಲೆ ಒಂದು ಮೊಟ್ಟೆ
ಮಗನೇ ತಂದೆಗೆ ಹೇಳಿದನು ನೀಡೆಂದು ನಿನಗೆ ಇಷ್ಟದ ತಟ್ಟೆ
ತಂದೆ ಕೊಟ್ಟ ತಟ್ಟೆಯಲಿ ಇತ್ತು ಮೂರು ಮೊಟ್ಟೆ
ನಾವಿನ್ನೊಬ್ಬರಿಗೆ ಬಯಸಿದರೆ ಒಳಿತು
ಹೆಚ್ಚಿನ ಫಲ ನಮಗೇ ಸಿಗುವುದೆಂದು ಅರಿತು
ತಂದೆಯ ಪಾಠವನ್ನು ನಮಗೆ ಹೇಳಿದ ಈ ಪರಂಧಾಮ
ಮತ್ಯಾರೂ ಅಲ್ಲ, ಇವನೇ ದಲೈ ಲಾಮಾ