ಬದುಕು ದೊಡ್ಡದೊಂದು ಬಹು ಸೀಟಿನ ಬಸ್ಸು
ಎಲ್ಲರ ಕೈಯಲ್ಲೂ ಸ್ಟೇರಿಂಗೂ ಕಾಲಲ್ಲಿ ಬ್ರೇಕು
ತಾವೇ ಚಾಲಕರು ಎಂಬುದೆಲ್ಲರ ಮೂಡ ನಂಬಿಕೆ
ನಿಜವಾದ ಚಾಲಕ ಯಾರಿಗೂ ಕಾಣಿಸುತ್ತಿಲ್ಲ
ರಸ್ತೆಯ ಉಬ್ಬು ತಗ್ಗುಗಳಿಗೆ
ಬಸ್ಸು ಕುಗ್ಗೇಳುವುದು ಸಹಜ
ಕೆಲವೊಮ್ಮೆ ಹೊರಗಿನ ಸುಂದರ ನೋಟ
ಆಗಾಗ ಅನಿರೀಕ್ಷಿತದ ಅಪಘಾತ
ಕೆಲವರದು ಒಂದೇ ಸೀಟಿನಲ್ಲೇ
ಬಹು ದೂರ ಜೋಡಿ ಪಯಣ
ಮತ್ತೆ ಕೆಲವರ ಸೀಟು
ಅಕ್ಕಪಕ್ಕದಲ್ಲೇ
ಅವರವರ ನಿಲ್ದಾಣ ಬಂದಾಗ
ಯಾರಿಗೂ ಹೇಳದೆಯೇ ಇಳಿಯುವರು
ಮಿಕ್ಕವರಿಗೆ ತಾನೇ ಚಾಲಕ
ತನ್ನ ನಿಲ್ದಾಣ ಬರುವುದೇ ಇಲ್ಲ ಎಂಬ ತಪ್ಪು ನಂಬಿಕೆ
ಹತ್ತಿರದವರು ಬಸ್ಸಿನಿಂದ ಇಳಿಯೇ
ಸ್ವಲ್ಪ ಸಮಯ ದುಃಖ
ಮತ್ತೇ ತಮ್ಮ ಹಿಡಿತದಲ್ಲೇ ಇರದ
ಅದೇ ಸ್ಟೇರಿಂಗ್ ಬ್ರೇಕ್‌ಗಳೊಡನೆ ಆಟ