ಒಮ್ಮೆ ಬೆಂಗಳೂರಿನಲ್ಲಿ ನಾನಿದ್ದೆ
ಆಗ ಜ್ಞಾನಪೀಠ ಪ್ರಶಸ್ತಿ ಪಡೆದಿದ್ದೆ
ಸರ್ಕಾರದಿಂದ ಗೌರವಧನ ಗಳಿಸಿದ್ದೆ
ನೂರಾರು ಕವಿಗಳ ಸ್ನೇಹ ಮಾಡಿದ್ದೆ
ಪುಸ್ತಕದ ಕಂತೆಗಳನ್ನೇ ಬರೆದಿದ್ದೆ
ಕಾವ್ಯಲೋಕದಲ್ಲಿ ನನ್ನದೆ ಛಾಪನ್ನು ಮೂಡಿಸಿದ್ದೆ
ಕನ್ನಡಿಗರ ಮನವನ್ನು ಗೆದ್ದಿದ್ದೆ
ಕರ್ನಾಟಕದ ಮನೆ ಮನೆಯ ಮಾತಾಗಿದ್ದೆ
ನನ್ನ ಈ ಕಾವ್ಯವನ್ನು ,ಜನರು ಓದಿದ್ದೇ
ಸುಳ್ಳುಗಾರನೆಂದು ನನ್ನ ಬಡಿದದ್ದೆ
ಕಾವ್ಯದ ಪ್ರಥಮ ಸಾಲಿನಲ್ಲಿ ಒಂದು ಪದ ಮರೆತಿದ್ದೆ
ಅದಲ್ಲ "ಒಮ್ಮೆ ಬೆಂಗಳೂರಿನಲ್ಲಿ ನಾನಿದ್ದೆ"
ಹೀಗೆ ಓದಿ "ಒಮ್ಮೆ ಬೆಂಗಳೂರಿನಲ್ಲಿ ನಾ ನಿದ್ದೆ ಮಾಡಿದ್ದೆ"