ವಿಮರ್ಶಕನಾಗುವ ಆಸೆ
ಯುವ ಕವಿಗಳಿಗೆ ಮಾರ್ಗದರ್ಶಕನಾಗುವ ಆಸೆ
ಕೈಗೆತ್ತಿಕೊಂಡೆ ಸಿಕ್ಕ ಒಂದು ಕವಿತೆಯನು
ಪ್ರಾರಂಭಿಸಿದೆ ಮಾಡಲು ಅದರ ವಿಮರ್ಶೆಯನು
ಕವನದಲಿ ವಿಷಯವಿಲ್ಲ
ಕವಿ ಹೊಸಬನೆಂಬುದಕ್ಕೆ ಸಂಶಯವಿಲ್ಲ
ಪದಗಳಲಿ ಶ್ವಾಸವಿಲ್ಲ
ಕವಿಗೆ ತನ್ನ ಮೇಲೆ ವಿಶ್ವಾಸವಿಲ್ಲ
ಶೀರ್ಷಿಕೆಯಂತೆ ಇದರಲ್ಲಿಲ್ಲ ಆಧ್ಯಾತ್ಮ
ಗೋಚರಿಸುತ್ತಿದೇ ಕವಿಯು ಅತೃಪ್ತ ಆತ್ಮ
ದೇವರಿಗೆ ಇದಾಗುವುದಿಲ್ಲ ಭಕ್ತಿಗೀತೆ
ರಚಿಸಿದ್ದಾನೆ ಸಂತೋಷದಲ್ಲಿ ಶೋಕಗೀತೆ
ಪ್ರೀತಿ ಪ್ರೇಮಗಳ ವಿಚಾರವಿಲ್ಲ
ಈತ ಗೃಹಸ್ಥನು ಅಲ್ಲ ಸಂನ್ಯಾಸಿಯೂ ಅಲ್ಲ
ವರ್ಣಿಸಿಲ್ಲ ಯಾವುದೇ ಮಾನವ ಸಂಬಂಧ
ಹೇಳಲಸಾದ್ಯ ಕವಿಯು ನಿರ್ಬಂಧ
ಕವಿಯ ಹೆಸರನ್ನು ನೋಡಿ ನಾನರಿತೆ
ಉದರಿ ಸಮಯದಲ್ಲಿ ಗೀಚಿದ್ದಾನೆ ಕವಿತೆ
ಅದಾಗಿತ್ತು ನನ್ನದೇ ಒಂದು ಹಳೆಯ ಕವಿತೆ
ಆತ್ಮವಿಮರ್ಶೆ ಕಷ್ಟವೆಂಬುದ ನಾ ಕಲಿತೆ.