ಮಾತನಾಡದೆ ಕಣ್ಣಿನಲ್ಲೇ
ವಿಷಯ ತಿಳಿಸಿ ಬಿಟ್ಟೆ ,
ಕ್ರೌರ್ಯ ತೋರದೆ ಮೌನದಲ್ಲಿ
ನನ್ನ ಭಯ ಪಡಿಸಿ ಬಿಟ್ಟೆ,
ಆಯುಧಗಳೇ ಇಲ್ಲದೆ ಹಾಗೆಯೇ
ನನಗೆ ಪೆಟ್ಟು ಕೊಟ್ಟೆ,
ಗಾಳವೇ ಇಲ್ಲದೆ ಮನಸ್ಸಿನಾಳದಲ್ಲಿ
ಇಳಿದು ಗಾಯ ಮಾಡಿ ಬಿಟ್ಟೆ
ನೀ ಯಾರೆಂದು
ನಾ ಹೇಳಲಾರೆ,
ಏಕೆಂದರೆ ನೀ
ನನ್ನ ಕಲ್ಪನೆಯು,
ಕವನ ಓದುಗರ ಮನದಲಿ
ಯಾರಾದರೂ ಬಂದರೆ,
ಅವರವರಿಗೆ ಅವಳೇ
ಈ ಕಾವ್ಯದ ರಾಣಿ.