ಗುರುರಾಜ
ಶಾಸ್ತ್ರಿ
ಏಕೆ ಹೀಗಾಯ್ತು ನನ್ನ ಬೆಂಗಳೂರು
13-08-2021
ಈ ದಿನ ತುಂಬಾ ಛಳಿ ನಾಳೆ ಬರೇ ಮಳೆ ನಾಡಿದ್ದು ಸುಡುವ ಬಿಸಿಲು ಏಕೆ ಹೀಗಾಯ್ತು ನನ್ನ ಬೆಂಗಳೂರು ನಿನ್ನೆ ತಂಪಾದ ಮಜ್ಜಿಗೆ ಕುಡಿಯುವ ಹಂಬಲ ಇಂದು ಬಿಸಿ ಬಜ್ಜಿ ಮಾಡಿಸಿಕೊಂಡು ತಿನ್ನುವ ಚಪಲ ನಾಳೆ ಛತ್ರಿ ಹಿಡಿದು ರಸ್ತೆಯಲ್ಲಿ ಅಡ್ಡಾಡುವ ಆಸೆ ಏಕೆ ಹೀಗಾಯ್ತು ನನ್ನ ಬೆಂಗಳೂರು ಒಂದೆಡೆ ರಾತ್ರಿ ಪೂರ್ತಿ ಮೌನ ಮತ್ತೊಂದೆಡೆ ರಾತ್ರಿಯೇ ನೃತ್ಯ ಗಾನ ಇನ್ನೊಂದೆಡೆ ರಾತ್ರಿಯಲ್ಲೇ ಜನರ ಪಯಣ ಏಕೆ ಹೀಗಾಯ್ತು ನನ್ನ ಬೆಂಗಳೂರು ಅಲ್ಲಿ ನೋಡು ರಸ್ತೆಯಲ್ಲಿ ಹಳ್ಳ ಇಲ್ಲಿದೆ ಹಳ್ಳದ ಮದ್ಯೆ ರಸ್ತೆ ಇನ್ನಲ್ಲೋ ರಸ್ತೆಯಿಲ್ಲ, ಹಳ್ಳವಿಲ್ಲ, ಮನೆ ಮಾತ್ರ ಏಕೆ ಹೀಗಾಯ್ತು ನನ್ನ ಬೆಂಗಳೂರು ಅಲ್ಲಿ ಹೋದರೆ ತಮಿಳುನಾಡಿನಂತಿದೆ ಇಲ್ಲಿ ಬಂದರೆ ಆಂಧ್ರಪ್ರದೇಶವಾಗಿದೆ ಮತ್ತೊಂದೆಡೆ ಬೇರೆ ದೇಶವೆ ನೆಲೆಸಿಹುದು ಏಕೆ ಹೀಗಾಯ್ತು ನನ್ನ ಬೆಂಗಳೂರು ವಾರಂತ್ಯಕ್ಕೆ ಎಲ್ಲರೂ ಹೋಟಲ್ಲುಗಳಲ್ಲಿ ಠಿಕಾಣೆ ಬೇರೆ ದಿನ ಸ್ವಿಗ್ಗಿ, ಜ಼ೊಮೇಟೋಗಳಲ್ಲಿ ಆಹಾರ ರವಾನೆ ಮನೆಯಲ್ಲಿ ಮಾಯವಾಗಿದೆ ಅಡುಗೆಮನೆ ಏಕೆ ಹೀಗಾಯ್ತು ನನ್ನ ಬೆಂಗಳೂರು ಪಾಠ ಕೇಳುವವರಿಲ್ಲ ಶಾಲೆ ಕಾಲೇಜಿನಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾರ್ಕು ಟಾಕೀಸಿನಲಿ ಸಂಸ್ಕೃತಿ ಅಡಗಿ ಕುಳಿತಿದೆ ಪಠ್ಯಪುಸ್ತಕದಲಿ ಏಕೆ ಹೀಗಾಯ್ತು ನನ್ನ ಬೆಂಗಳೂರು ಮಾಯವಾಗಿದೆ ಹಕ್ಕಿಗಳ ಚಿಲಿಪಿಲಿ ಗಾನ ಶಬ್ಧವ ಸ್ವತ್ತು ಮಾಡಿಕೊಂಡಿದೆ ಮೋಟಾರು ವಾಹನ ಹುಡುಕಿದರೂ ಸಿಗುತ್ತಿಲ್ಲ ನಿಶ್ಯಬ್ಧ ಮೌನ ಏಕೆ ಹೀಗಾಯ್ತು ನನ್ನ ಬೆಂಗಳೂರು   ಎಲ್ಲರಿಗೂ ಇಲ್ಲಿಯೇ ಬೇಕು ಸ್ವಂತ ಮನೆ ದಿನಾ ಕುಡಿಯುತ್ತಾರೆ ಕಾವೇರಿ ನೀರನ್ನೇ ಕಾವೇರಿ ಹೋರಾಟಕ್ಕೆ ಇವರ ಹಾಜರಾತಿ ಬರಿ ಸೊನ್ನೆ ಏಕೆ ಹೀಗಾಯ್ತು ನನ್ನ ಬೆಂಗಳೂರು ಇನ್ನೂ ಕರೆಯುತಲೇ ಇದೇ ಜನರನ್ನು ಕೈ ಬೀಸಿ ಪಾಲಿಕೆಗೆ ನಿಭಾಯಿಸಲಾಗುತ್ತಿಲ್ಲ ಕಸದ ರಾಶಿ ಕಾಂಕ್ರೀಟ ಕಾಡಿನ ಭರದಲ್ಲಿ ಮಾಯಾ ಸಸ್ಯ ಕಾಶಿ ಏಕೆ ಹೀಗಾಯ್ತು ನನ್ನ ಬೆಂಗಳೂರು
ಅನಿಸಿಕೆಗಳು