ಮನೆಮನೆಯಲಿ, ಗಲ್ಲಿಗಲ್ಲಿಯಲಿ
ಮನದಲಿ, ನಾಲಿಗೆಯಲಿ
ಕಿವಿಗಳಲಿ, ಉಸಿರಾಟದಲಿ
ಆವರಿಸಿಕೊಂಡಿತ್ತು ರಾಮ ಜಪ ಅಂದು
ಆದರೂ ರಾಮನಿಗೆ ಆಗ ಮಂದಿರವಿರಲಿಲ್ಲ
ಭವ್ಯ ಮಂದಿರ ನಿರ್ಮಾಣವಾಗುತಿರೆ ಇಂದು
ಮೂಲೆ ಮೂಲೆಯಿಂದ ಲಕ್ಷ್ಮೀ ಕಟಾಕ್ಷ ಬರುತಿರೆ
ಆಕೆಯ ಝೇಂಕಾರಕೆ ಮಾಯವಾದನೇ ರಾಮ..
ಜಪ ತಪಾದಿಗಳೇ ಕಾಣದಾದ ಮೇಲೆ
ಅದರೊಳಿಗಿನ ರಾಮನಿನ್ನೆಲ್ಲಿ..
ಬರೇ ಲಕ್ಷ್ಮಿಯದೇ ಆರ್ಭಟ
ಈಗ ಮಾತು ಮನಗಳಲ್ಲಿ