ವೇದ ಪಠಣಕ್ಕೂ ಇದೆಯಂತೆ ರಾಗ
ಅದೇಕೋ ಪುರೋಹಿತರ ಪಠಣ ತುಂಬಾ ವೇಗ
ವೇದದಲ್ಲಿರೋ ಉದಾತ್ತ ಅನುದಾತ್ತ ಸ್ವರಿತ
ಪುರೋಹಿತರ ವೇಗಕ್ಕೆ ಸ್ವರವೆಲ್ಲಾ ಗೋತಾ
ಕೇಳುವಂತಿರಬೇಕು ಸುಶ್ರಾವ್ಯ ವೇದದ ನಾದ
ವೇಗದಲ್ಲಿ ಮಾಯವಾಗಿದೆ ಆ ನಾದದ ಸ್ವಾದ
ಸಂಭಾವನೆಗೆ ಮಾತ್ರ ಕಲಿತರೆ ವೇದ
ಬೇರೆ ಪಠ್ಯಕ್ಕೂ ಇದಕ್ಕೂ ಎಲ್ಲಿದೆ ಭೇದ
ಭರ್ರನೇ ಪಠಿಸಿ ಮುಗಿಸುವುದರಲ್ಲಿ
ಏನಿದೆ ಬರಲಿರುವ ಯೋಗ
ಸಮಯವಿಲ್ಲದ್ದೂಡೆ ಪಠಿಸಿ ಸಾಕು
ವೇದದ ಒಂದು ಚಿಕ್ಕ ಭಾಗ
ಆತ್ಮ ಸಾಕ್ಷಾತ್ಕಾರದೆಡಗೇ
ಕರೆದೊಯ್ಯಬೇಕಿದೆ ವೇದದ ಶ್ರವಣ
ವೇಗ ಕಡಿಮೆಯಾಗದೊಡೆ
ಶ್ರವಣ ಕೇವಲ ಬೈಗಳ ಹೂರಣ