ಹಳೆಯ ಫೋಟೋಗಳನ್ನು
ನೋಡುವುದು ಎಷ್ಟು ಚೆನ್ನ
ಬಹಳ ದಿನವಾಗಿದೆ
ಹುಡುಕ ಬೇಕಿದೆ ನಾನೇ ನನ್ನನ್ನ
ಎಷ್ಟು ಮುಗ್ಧತೆಯಲ್ಲಿತ್ತು
ಚಿಕ್ಕಂದಿನಲ್ಲಿ ಮನಸ್ಸು,
ಅಳಸಿ ಹಾಕಿದೆ ಮುಗ್ಧತೆಯನ್ನು
ಈ ಹಾಳು ವಯಸ್ಸು
ಅಲ್ಲಿಂದ ಇಲ್ಲಿಂದ ಎಲ್ಲೆಲ್ಲಿಂದಲೋ
ಮತ್ತೆ ಸೇರಿದೆ ಈ ಸಹಪಾಠಿಗಳ ಕೂಟ
ಮುನ್ನೋಟವಾಗಿ ಬರಲಾರಂಭಿಸಿದೆ
ಆ ಶಾಲಾ ದಿನಗಳ ಹಿನ್ನೋಟ
ಮತ್ತೆ ಪಡೆಯುವುದಕ್ಕೆ ಸಾಧ್ಯವಿಲ್ಲ
ಆ ಚಿಕ್ಕಂದಿನ ಸಾಮ್ರಾಜ್ಯ
ಶಾಲಾ ದಿನದ ಸನ್ನಿವೇಶಗಳ ನೆನೆದು
ನಗುವುದೇ ನಮಗಿರುವ ಸೌಭಾಗ್ಯ
ಮರೆತಿರಲಿಲ್ಲ ಎಲ್ಲರನ್ನೂ
ಮರೆತಂತಿದ್ದೆ ಅಷ್ಟೇ
ಕವಿತೆ ಬರೆಯುವುದು ಒಂದೇ
ಬದಲಾಗದ ಗುರುರಾಜನ ಪ್ರತಿಷ್ಠೆ