ಅರಿತಿಹೆನು ನಿನ್ನ ಎಂದರೆ ಅರಿತಿಲ್ಲವಂತೆ
ಅರಿಯಲಾಗಲಿಲ್ಲ ಎಂದರೆ ಅರಿತಿಹೆನಂತೆ
ಹುಟ್ಟಿನಿಂದ ಜಾತಿ ಅಲ್ಲವಂತೆ
ವೃತ್ತಿಯಿಂದ ಜಾತಿಯಂತೆ
ವೇದ ಕಲಿತವನು ಬ್ರಾಹ್ಮಣನಾಗುತ್ತಾನಂತೆ
ದೇಶ ಕಾಯುವವನು ಕ್ಷತ್ರಿಯನಾಗುತ್ತಾನಂತೆ
ಕೃಷಿ ಮಾಡುವವನು ವೈಶ್ಯನಾಗುತ್ತಾನಂತೆ
ಸುಮ್ಮನೆ ಇರುವವನು ಶೂದ್ರನಾಗುತ್ತಾನಂತೆ
ನಿನ್ನ ಬಿಡಿಸಿ ವರ್ಣಿಸಲಿ ಹೇಗೆ
ನಿನ್ನ ಕಲ್ಪನೆಯ ಮಾಡಿಕೊಳ್ಳಲಿ ಹೇಗೆ
ಇದಕ್ಕೆ ನಿನ್ನ ಉತ್ತರ ಹೀಗಿದೆಯಂತೆ
ಬ್ರಾಹ್ಮಣರ ಮಾತಿನಲ್ಲಿ ನಾ ನೆಲೆಸಿರುವೆ
ನಮಸ್ಕರಿಸು ಅದಕೆ
ಕ್ಷತ್ರಿಯರ ಬಾಹುಗಳಲ್ಲಿ ನಾ ತಂಗಿರುವೆ
ನಮಿಸು ಅದಕೆ
ವೈಶ್ಯರ ತೊಡೆಯಲ್ಲಿ ನಾ ನೆಲೆಸಿರುವ
ವಂದಿಸು ಅದಕೆ
ಶೂದ್ರರ ಪಾದಗಳಲ್ಲಿ ನಾ ನೆಲೆಸಿರುವೆ
ನಮಸ್ಕರಿಸು ಅದಕೆ