ಊರೂರು ಸುತ್ತುತ್ತಾನಂತೆ
ಪಕ್ಷಿ ವೀಕ್ಷಣೆ ಮಾಡುತ್ತಾನಂತೆ
ಕಾಡುಮೃಗಗಳ ಚಿತ್ರ ಸೆರೆ ಹಿಡಿಯುತ್ತಾನಂತೆ
ಸ್ವಂತ ಊರಿನಲ್ಲಿ ಇವನ್ನ ಕಾಣೋದೇ ಕಷ್ಟವಂತೆ
ಯಾರಿವನು?
ಸಂಪಾದನೆ ಮಾಡಿದ್ದು ಸಾಕಂತೆ
45 ವರ್ಷಕ್ಕೆ ಕೆಲಸ ಬಿಟ್ಟನಂತೆ
ಜೀವನಕ್ಕೆ ಪಿಂಚಣಿ ಹಣವೇ ಜಾಸ್ತಿ ಅಂತೆ
ಪ್ರಪಂಚವೇ ಇವನ ಆಟದ ಮೈದಾನವಂತೆ
ಯಾರಿವನು?
ವಿಚಿತ್ರವಂತೆ ಇವನ ಜೀವನದ ನಾಲೆ
ಹಾಕಲಿಲ್ಲ ಯಾವ ಬಾಲೆಯ ಕೊರಳಿಗೂ ಮಾಲೆ
ಹಾಗಾಗಿಯೇ ಈ ಊರು ಸುತ್ತುವ ಲೀಲೆ
ಇವನ ಜೀವನ ಅರ್ಥವಾಗದ ಒಂದು ಪಾಠಶಾಲೆ
ಯಾರಿವನು?
ನಮಗೇಕೆ ಬೇಕು ಬೇರೆಯವರ ಉಸಾಬರಿ
ಅದೃಷ್ಟ ಇಷ್ಟಕ್ಕೆ ತಕ್ಕಂತೆ ಬದುಕ್ತಾ ಇದ್ದಾನ್ ರೀ
60ರ ನಂತರ ನಾವು ನಿವೃತ್ತಿಯಾಗ್ತೀವ್ ರೀ
ವ್ಯತ್ಯಾಸ ಇಷ್ಟೇ ಸುತ್ತಾಡಕ್ಕೆ ಆಗ ಶಕ್ತಿ ಇರಲ್ ರೀ
ಯಾರಿವನು?
ಎಳೆಯರಿಂದ ಮುದಿಯರೆಲ್ಲ ಇವನ ಗೆಳೆಯರಂತೆ
ಫೇಸ್ಬುಕ್ ವಾಟ್ಸ್ಅಪ್ ಮುಖ್ಯವಾಹಿನಿಯಂತೆ.
ಅಲ್ಲಿ ಕವನ ಲೇಖನ ಬರೆಯುವನಂತೆ
ಓದುಗರ ಆಭಿಪ್ರಾಯಕ್ಕೆ ಕಾಯುತ್ತಾನಂತೆ
ಯಾರಿವನು?