ಕಾಡಿನಲ್ಲಿ ಒಂದು ದೊಡ್ಡ ಯುದ್ದವಾಯಿತು
ಗೆದ್ದವನೇ ರಾಜನೆಂದು ಡಂಗೂರವಾಯಿತು
ಬೆಕ್ಕೊಂದು ಹುಲಿಯೊಡನೆ ಸೇರಿಕೊಂಡಿತು
ನಾಯಿಗಳು ಬೆಕ್ಕು ಹುಲಿಗೆ ಎದುರಾಳಿಯಾಯಿತು
ಹುಲಿಯ ಶಕ್ತಿಗೆ ನಾಯಿ ಸೋಲನೊಪ್ಪಿತು
ರಾಜ ನೀನೇ ಹುಲಿರಾಯ ಎಂದು ಹೇಳಿತು
ಇದನು ಕೇಳಿ ಬೆಕ್ಕು ಬಹಳ ಕೋಪಗೊಂಡಿತು
ತನ್ನಿಂದಲೇ ಹುಲಿಯು ಯುದ್ದ ಗೆದ್ದಿತೆಂದಿತು
ರಾಜ ಪದವಿಗೆ ಬೆಕ್ಕು ಆಸೆ ಪಟ್ಟಿತು
ಹುಲಿಯು ಪಕ್ಕ ಸರಿದು ನಕ್ಕು ಸುಮ್ಮನಾಯಿತು
ನಾಯಿಗಳ ಸಹಾಯ ಬೆಕ್ಕು ಕೇಳಿತು
ರಾಜನಾಗುವ ತನ್ನ ಆಸೆ ತಿಳಿಸಿತು
ನಾಯಿಗಳು ಬೆಕ್ಕಿಗೆ ಸಹಾಯ ನೀಡಿತು
ಸಮಯ ನೋಡಿ ಬೆಕ್ಕನ್ನೇ ತಿಂದು ಮುಗಿಸಿತು
ಮತ್ತೆ ಕಾಡಿಗೆ ಹುಲಿ ರಾಜವಾಯಿತು
ಸೊಕ್ಕ ಬೆಕ್ಕು ಕಾಲದಲ್ಲಿ ಇತಿಹಾಸವಾಯಿತು