ಮೊದಲೆರೆಡು ತಿಂಗಳು
ಎಷ್ಟು ಚೆಂದವಿತ್ತು ನಿನ್ನ ರೂಪ
ನಂತರ ನೀನಾದೆಯೆಲ್ಲಾ
ಜಗತ್ತಿಗೆ ದೊಡ್ಡ ಶಾಪ
ಬಂಧು ಬಳಗ ಗೆಳೆಯರೆನ್ನೆಲ್ಲಾ
ದೂರ ಮಾಡಿತು ನಿನ್ನ ಆಗಮನ
ಮನೆಯಲ್ಲೇ ಕೂಡಿಹಾಕಿಬಿಟ್ಟೆಯೆಲ್ಲಾ
ಎಲ್ಲೂ ಹೋಗದ ಹಾಗೆ ನನ್ನ
ನಿಶ್ಚಿತಾರ್ಥ, ಆರತಕ್ಷತೆ
ಮದುವೆ ಮುಂಜಿ
ಮಾಯವಾಗಿ ಹೋಯಿತು
ನಿನ್ನಾರ್ಭಟಕ್ಕೆ ಅಂಜಿ
ಸಾವು, ತಿಥಿ ವೈಕುಂಟ ಸಮಾರಾಧನೆಗಳ
ಆಹ್ವಾನಗಳೇ ಬಂದದ್ದು ಕೊನೆಗೆ
ಅವಕ್ಕೆ ಹೋಗಲೂ
ಧೈರ್ಯವಿಲ್ಲದಾಯಿತು ನನಗೆ
ಸಾಕು, ನನಗೆ ಬೇಕಿದೆ
ಈಗಲೇ ನಿನ್ನಿಂದ ವಿಚ್ಚೇದನ
ಇನ್ನೆಂದೂ ಮತ್ತೆ ಬಾರದಿರು
ಕಾಡಲು ಈ ಜಗವನ್ನ