ಕಾಲೇಜಿನ ಪಾಠಕ್ಕೆ ಚಕ್ಕರ್
ಹೋಳಿ ಹಬ್ಬಕ್ಕೆ ಹಾಜರ್
ಹಬ್ಬ ಒಂದು ನೆಪವಷ್ಟೇ
ಬಣ್ಣದಾಟದಲಿ ಅಡಗಿವೆ ಕಪಿಚೇಷ್ಟೆ
ಬಣ್ಣ ಹಚ್ಚುವ ನೆಪದಿ
ಕೆನ್ನೆ ಸವರುವ ಆಸೆ
ಕೋಪದಿ ನೀ ಬಣ್ಣ ಹಚ್ಚಿ
ಸ್ಪರ್ಶಸುಖ ಅನುಭವಿಸುವಾಸೆ
ಯಾಕೆ ಬಣ್ಣದೋಕುಳಿ ಆಟ
ಮನವು ಓದಿ ಅರಿತಿಲ್ಲ
ಕುರುಡು ಪ್ರೇಮದ ಆನಂದದಿ
ಹಬ್ಬದ ಒಳ ಅರ್ಥ ಬೇಕಿಲ್ಲ
ಬಣ್ಣದೋಕುಳಿಯಲಿ ಬಚ್ಚಿಟ್ಟ ಮುಖ
ನಮ್ಮ ಗುರುತು ಯಾರಿಗೂ ಸಿಗುವುದಿಲ್ಲ ಸಖ
ಕೈ ಹಿಡಿದು ಸುತ್ತೋಣ ಬೀದಿ ಬೀದಿಯಲಿ
ಎಂದಳವಳು ಇಂದಿಲ್ಲ ಭಯ ಪರಿಚಯದವರಲಿ
ಮುಗಿದಿದೆ ಹೋಳೀ ಹಬ್ಬದ ಹರ್ಷ
ಕಾಯಬೇಕು ಇನ್ನೊಂದು ವರ್ಷ
ಕಾಣಲು ಈ ಸುದಿನ
ಉಳಿದಿದ್ದರೆ ನನ್ನ ಅವಳ ಗೆಳೆತನ