ಎಚ್ಚೆಸ್ಕೆ ನೆನಪಲ್ಲಿ ಮಹಾಕವಿಗಳ ಸಮ್ಮೇಳನ
ನನಗೂ ಕೊಟ್ಟರು ರವೀಂದ್ರ ಆಹ್ವಾನ
ಬರೆಯಲು ಪ್ರಾರಂಭಿಸಿದೆ ಹೊಸ ಕವನ
ನಿನ್ನೆ ಖಾತ್ರಿ ಮಾಡಿಕೊಂಡರು ನನ್ನ ಆಗಮನ
ಬರುವಾಗ ತರಬೇಕೆಂದರು ಕ್ಯಾಮೆರಾವನ್ನ
ಜೇಬಿನಲ್ಲಿ ಇಟ್ಟೇ ಬರೆದ ಕವನವನ್ನ
ಮಾಡಿದರು ನನ್ನನ್ನು ಛಾಯಾಗ್ರಾಹಕನನ್ನ
ಕ್ಲಿಕ್ಕಿಸಿದೆ ಮಹಾಕವಿಗಳ ವಾಚನವನ್ನ
ಕಡೆಗೂ ನನಗೂ ಬಂತು ವಾಚನಕ್ಕೆ ಆಹ್ವಾನ
ವಾಚಿಸಿದೆ ನನ್ನ ಸಾಧಾರಣ ಕವನ
ಮೆಚ್ಚದಿದ್ದರೇನಂತೆ ಈ ನನ್ನ ಕವನ
ಮಹಾನ್ ಕವಿಗಳ ಕ್ಲಿಕ್ಕಿಸಿದ್ದೆ ನನಗೆ ಬಹುಮಾನ
ಕಾವ್ಯ ವಾಚನಕ್ಕೆ ನನಗೆ ಬರಲೇ ಇಲ್ಲ ಆಹ್ವಾನ
ಉಳಿದೇಬಿಟ್ಟಿತು ಜೇಬಿನಲ್ಲಿ ನನ್ನ ಕವನ
ಇದರಿಂದ ನನಗೇನಿಲ್ಲ ಅವಮಾನ
ಮಹಾನ್ ಕವಿಗಳ ಕ್ಲಿಕ್ಕಿಸಿದ್ದೆ ನನಗೆ ಬಹುಮಾನ