ಹಾಲ್ ಹರವೀ ಬಂದೋ ನೂರೊಂದ್ ಹಾಲ್‌ಹರವೀ ಬಂದೋ
ಮಾದೇವ್ನ ಮಜ್ಜನ ದೋತ್ತಿಗೆಳುಮಲೆಗ್ ಹಾಲ್ ಹರವೀ ಬಂದೋ (ಈ ರಾಗದಲ್ಲಿ)
ಗದ್ಯವು ಗೊತ್ತಿಲ್ಲಾ ನನಗೆ ಪದ್ಯವು ತಿಳಿದಿಲ್ಲ | ೨ |
ಗದ್ಯ ಪದ್ಯ ಬರೆಯುವಂತೆ ಹರಸೋ ನೀ ಗಣಪಾ
ನನಗೆ ಹರಸೋ ನೀ ಗಣಪಾ
ಪದಗಳ ಓದಿಲ್ಲಾ ಕೆಲವು ಪದಗಳ ನೆನಪಿಲ್ಲಾ | ೨ |
ಕಲೀತ್ತ ಪದಗಳ ನೆನಪಿಸೊ ಕೆಲಸ ಮಾಡೋ ನೀ ಗಣಪಾ
ನನಗೆ ನೆನಪಿಸೋ ನೀ ಗಣಪ
ಹೊಗಳಿಕೆ ಬೇಕಿಲ್ಲಾ, ತೆಗಳಿಕೆ ಬಯವಿಲ್ಲ | ೨ |
ಹೊಗಳಿಕೆ ತೆಗಳಿಕೆ ನಿನ್ನ ಪಾದದಿ ಶರಣೆಂದೆ ಗಣಪಾ
ನಿನಗೆ ಶರಣೆಂದೇ ಗಣಪಾ
ವ್ಯಾಕರ್ಣ ಓದಿಲ್ಲಾ, ಛಂದಸ್ಸು ತಿಳಿದಿಲ್ಲ | ೨ |
ಬರೆಯುವ ನಾನು ಬರೆಸುವ ನೀನು ಭಯವಿಲ್ಲಾ ಗಣಪಾ
ನನಗೆ ಭಯವಿಲ್ಲಾ ಗಣಪಾ
ವಿಷಯ ಬೇರೆ ಇಲ್ಲಾ, ಕಾವ್ಯಕೆ ನಿನ್ನ ವಿಷಯವೆಲ್ಲಾ | ೨ |
ನೀ ಸಂತೋಷದಿ ಕೇಳುತ ಕುಣಿದರೆ ಮತ್ತೇನು ಬೇಕಿಲ್ಲ
ನನಗೆ ಮತ್ತೇನು ಬೇಕಿಲ್ಲಾ