ನಾವೇಕೆ ಕೀಳು ಜಾತಿ
ನಮಗೇಕೆ ಮೀಸಲಾತಿ
ಎಂದು ಕೇಳಿದ ಮಗ ಸಿದ್ಧ
ಕೀಳು ಜಾತಿ ಹುಟ್ಟಿನಿಂದಲ್ಲ
ಮೇಲ್ಜಾತಿಯವರ ದೃಷ್ಟಿಯಿಂದ
ಎಲ್ಲರೂ ಪರಮಾತ್ಮನ ಮಕ್ಕಳೇ
ಎಂದ ತಂದೆ ಮುದ್ದ
ಎಲ್ಲದರಲ್ಲೂ ನಾವು
ಮಾಡುತ್ತಿದ್ದೇವೆ ಪ್ರಗತಿ
ಮತ್ತೆ ನಮಗೇಕೆ ಬೇಕು
ಈಗ ಮೀಸಲಾತಿ ಎಂದ ಸಿದ್ಧ
ಶತಶತಮಾನದ ದಬ್ಬಾಳಿಕೆಗೆ
ತುತ್ತಾದವರು ನಾವು
ಓದು ಬರಹಕ್ಕೆ
ಅವಕಾಶವಂಚಿತರಾದ ನಾವು
ನಾವು ಪಟ್ಟ ಕಷ್ಟಕ್ಕೆ
ಮೀಸಲಾತಿ ಬಂದದ್ದು ವರ
ಅವರು ಮಾಡಿದ ದೌರ್ಜನ್ಯಕ್ಕೆ
ಅವರಿಗದೇ ಶಾಪ