ಗುರುರಾಜ
ಶಾಸ್ತ್ರಿ
ಕೀರ್ತಿ- ಪಂಜರ
13-08-2021
ಹಾರಾಡಲು ಇಷ್ಟಪಡುವ ಹಕ್ಕಿಯ ಕಟ್ಟುಹಾಕುವವರೇ ಬಹಳ ಉನ್ನತ ಶಿಖರದಲ್ಲಿದ್ದ ಬೋನಿನಿಂದ ಬಿಡಿಸಿಕೊಂಡವನು ನಾನು ಹಾರಾಡಿ ಸುತ್ತಾಡಿ ಓಡಾಡಿ ಭೂಮಿ ನೋಡಬೇಕೆಂದವನು ನಾನು ಅದೇನೋ ಈ ಜನರ ಹುಚ್ಚು ಚಿಂತೆ ಏನಾದರೊಂದಕ್ಕೆ ನಾನು ತಗಲಿಕೊಂಡಿರಬೇಕಂತೆ ಸದಾ ಹುಡುಕುತ್ತಲೇ ಇರುತ್ತಾರಂತೆ ಕಟ್ಟಿಹಾಕಲು ನನ್ನ ಪಂಜರದೊಳಗಂತೆ ಕೀರ್ತಿ ಪದವಿಗಳ ಆಸೆ ತೋರುವನೊಬ್ಬ ದೇಶ ಸೇವೆಯ ಪಾಠ ಸದಾ ಮಾಡುವವನೊಬ್ಬ ಗೌರೀಶಂಕರ ಶಿಖರ ಏರಿ ಇಳಿದವನು ರಾಗಿಗುಡ್ಡಕೆ ಮನಸೋಲುವನೇ ನಿಮ್ಮ ಸಿದ್ದಾಂತ ಬೇಡವೆಂದರು ಕೇಳರು ನನ್ನಾಸೆಗಳಿಗೆ ಗುರಿಗಳಿಗೆ ಅವರು ಕಿವುಡರು ಎಲ್ಲಾದರು ಕಟ್ಟಿಹಾಕುತ್ತೇವೆ ಎಂದು ಹೇಳ್ವರು ಬಿಡಿಸಿ ಓಡೋದು ನನಗೆ ಅಭ್ಯಾಸವೆಂದು ತಿಳಿಯರು ಭೂಮಿ ಪರ್ಯಟನೆ ನನ್ನ ಗುರಿ ಬಲೆಗೆ ಬೀಳದಂತೆ ಹಾರುವುದು ನನ್ನ ಪರಿ ನನ್ನ ಜೀವನ ನನ್ನದೆಂದು ಎಂದೋ ಅರಿಯುವರಂತೆ ನಾನಲ್ಲಿಯವರೆಗೆ ಮೈಗೆ ಎಣ್ಣೆ ಹಚ್ಚಿಕೊಂಡವನಂತೆ.
ಅನಿಸಿಕೆಗಳು