ಗುರುರಾಜ
ಶಾಸ್ತ್ರಿ
ನಾಟಕ ರಚನೆಯ ಸಿಹಿ ಕಹಿ ಅನುಭವ
24-07-2021
ಒಂದು ನಾಟಕದ ಮೊದಲನೆ ಪ್ರದರ್ಶನದ ತಯಾರಿ ನಡೆಯುವಾಗ ನಾಟಕ ರಚನಾಕಾರನ್ನು ನಿರ್ದೇಶಕರು ಕರೆಸಿ ತಾವು ತಯಾರಿ ಮಾಡುತ್ತಿರುವಂತಹ ನಾಟಕದ ಮೂಲವಸ್ತು ರಚನಾಕಾರರ ಉದ್ದೇಶಕ್ಕೆ ಹೊಂದುತ್ತಿದೆಯೇ ಎಂದು ವಿಚಾರಿಸುತ್ತಾರೆ. ಹೀಗೆ ತಯಾರಿ ನಡೆದ ಮೊದಲ ಪ್ರದರ್ಶನ ನಾಟಕ ರಚನಾಕಾರರಿಗೆ ಅತೀವ ಸಂತೋಷ ತರುತ್ತದೆ. ಹೀಗೆ ಮುಂದುವರೆದ ಪ್ರದರ್ಶನಗಳು ಮೂರನೇ ಅಥವಾ ನಾಲ್ಕನೇ ಪ್ರದರ್ಶನಕ್ಕೆ ಹೋದಾಗ ಭಾಷೆಯೇ ಬದಲಾಗಿ ಬಿಟ್ಟಿರುತ್ತದೆ. 8 ಅಥವಾ 10 ನೇ ಪ್ರದರ್ಶನದ ಹೊತ್ತಿಗೆ ನಾಟಕದ ವಿಷಯದ ಮೂಲ ವಿಚಾರವನ್ನೇ ಮರೆತಿದ್ದಾರೆನೋ ಎಂಬಂತಿರುತ್ತದೆ. ತಾವು ರಚಿಸಿದ ನಾಟಕದ 15ನೇ ಪ್ರದರ್ಶನಕ್ಕೆ ಹೋದಾಗ ಈ ನಾಟಕ ನಾನೇ ರಚಿಸಿದ್ದ ಎಂಬ ಅನುಮಾನ ಪ್ರಾರಂಭವಾಗುತ್ತದೆ. ತಪ್ಪು ಎಲ್ಲಾಗುತ್ತಿದೆ ಎಂದು ಕೂಲಂಕುಷವಾಗಿ ಪರಿಶೀಲಿಸಿದಾಗ ಪ್ರೇಕ್ಷಕರು ನಾಟಕ ನೋಡಿದ ನಂತರ ನೀಡುವ ಹೇಳಿಕೆಗಳ ಮೇಲೆ ಮುಂದಿನ ಪ್ರದರ್ಶನಗಳಲ್ಲಿ ಬದಲಾವಣೆಗಳು ಪ್ರಾರಂಭವಾಗುತ್ತದೆ. ಹೀಗಾಗಿ ತುಂಬಾ ಸೀರಿಯಸ್ ಆಗಿದ್ದ ನಾಟಕಕ್ಕೆ ಪ್ರೇಕ್ಷಕರು ಸ್ವಲ್ಪ ಕಾಮಿಡಿ ಬೆರೆಸಿ ಎಂದು ಹೇಳಿದರೆ, ನಿರ್ದೇಶಕರೇ ನಾಟಕಕ್ಕೆ ತಮಗೆ ಅನ್ನಿಸುವ ಕೆಲವು ಕಾಮಿಡಿ ಸೀನ್ ಗಳನ್ನು ಸೇರಿಸಿಬಿಡುತ್ತಾರೆ. ಸಮಸ್ಯೆ ಆಗುವುದು ಯಾವಾಗ ಎಂದರೆ, ನಿರ್ದೇಶಕರು ರಚನೆಯಲ್ಲಿ ಇಲ್ಲದ ವಿಷಯಗಳನ್ನು ನಾಟಕಗಳಲ್ಲಿ ತುಂಬಿದಾಗ ಅದು ಹೆಚ್ಚು ಪ್ರಭಾವ ಬೀರದಿದ್ದರೇ ಆದರೆ ತೆಗಳಿಕೆಯು ರಚನಾಕಾರಿಗೇ ತಲುಪುತ್ತದೆ. ಹೀಗಾಗಿ ನಾಟಕಗಳು ಪುಸ್ತಕಗಳಲ್ಲಿ ಸೀರಿಯಸ್ ಆಗಿದ್ದರು ರಂಗಮಂಚದ ಮೇಲೆ ಉತ್ತಮ ಹಾಸ್ಯ ನಾಟಕಗಳಾಗಿ ಹೆಸರು ಮಾಡಿದ್ದರೆ ಆಶ್ಚರ್ಯವೇನಿಲ್ಲ. ರಚನಾಕಾರರು ಓದುಗರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಾಟಕ ಬರೆದರೆ, ನಿರ್ದೇಶಕನು ಪ್ರೇಕ್ಷಕರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಾಟಕವನ್ನು ನಿರ್ದೇಶಿಸುತ್ತಾನೆ. ಹೀಗಾಗಿ ಇಲ್ಲಿ ಯಾರದೂ ತಪ್ಪಿಲ್ಲ. ನಾಟಕ ರಚನೆಯ ಮೂಲ ಉದ್ದೇಶಕ್ಕೆ ಚ್ಯುತಿ ಬಂದಾಗ ರಚನಾಕಾರರಿಗೆ ನೋವಾಗುವುದು ಖಂಡಿತ. ನಾನು ರಚಿಸಿದ ನಾಟಕಗಳ ಮೊದಲನೇ ಪ್ರದರ್ಶನದ ನಂತರ ಮುಂದೆ ಯಾವ ಪ್ರದರ್ಶನಕ್ಕೂ ಹೋಗಬಾರದು ಎಂಬುದು ನಾನು ಈ ನೋವಿಗೆ ಕಂಡುಕೊಂಡಂತ ಒಂದು ಸುಲಭ ಉಪಾಯ. ಓದುಗರನ್ನು ಮನಸ್ಸಿನಿಂದ ತೆಗೆದು ಪ್ರೇಕ್ಷಕರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಾಟಕಗಳನ್ನು ರಚಿಸುವ ಹಾದಿಯಲ್ಲಿ ಮುಂದುವರೆಯುತ್ತಾ, ನಿಮ್ಮವ ಗುರುರಾಜ ಶಾಸ್ತ್ರಿ
ಅನಿಸಿಕೆಗಳು




Mamatha
02-09-2021
Hai read all your write ups. Very nice Thanks